ಕೂಡ್ಲಿಗಿಯ ೫ ಮುಖ್ಯ ಪಾರಂಪರಿಕ ಪ್ರವಾಸಿ ತಾಣಗಳು
ವಿವರಗಳನ್ನು ನೋಡಲು ಯಾವುದೇ ತಾಣದ ಕಾರ್ಡ್ ಮೇಲೆ ಕ್ಲಿಕ್ ಮಾಡಿ:
ಪ್ರವಾಸಿ ತಾಣವಾಗದ ಹುತಾತ್ಮರ ಸ್ಮಾರಕ (ಗಾಂಧಿ ಸೌಧ)

ಐತಿಹಾಸಿಕ ಹಿನ್ನೆಲೆ, ಪ್ರಮುಖ ಸತ್ಯಗಳು & ಮಹತ್ವ:
1948ರ ಫೆಬ್ರವರಿ 12ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು (ಅಸ್ಥಿ) ದೇಶದ ನಾನಾ ಪವಿತ್ರ ನದಿಗಳು ಮತ್ತು ಪುಣ್ಯಕ್ಷೇತ್ರಗಳಿಗೆ ರವಾನಿಸಲಾಗಿತ್ತು. ಅಂದು ಅಂದಿನ ಬಳ್ಳಾರಿ (ಇಂದಿನ ವಿಜಯನಗರ) ಜಿಲ್ಲೆಯ ಕೂಡ್ಲಿಗಿ ಪಟ್ಟಣಕ್ಕೆ ಗಾಂಧೀಜಿಯವರ ಅಸ್ಥಿ ಪೆಟ್ಟಿಗೆಯನ್ನು ತಂದು, ಪಟ್ಟಣದ ಮಧ್ಯಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟು ಪೂಜಿಸಲಾಯಿತು. ನಂತರ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ಗಾಂಧೀಜಿಯವರ ಅಸ್ಥಿ ಸ್ಪರ್ಶಿಸಿದ ಈ ಪವಿತ್ರ ಮಣ್ಣಿನ ನೆನಪಿಗಾಗಿ ಕೂಡ್ಲಿಗಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ 'ಹುತಾತ್ಮರ ಸ್ಮಾರಕ'ವನ್ನು (ಗಾಂಧಿ ಸೌಧ) ಸ್ಥಾಪಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೂಡ್ಲಿಗಿ ಭಾಗದ ವೀರ ದೇಶಪ್ರೇಮಿಗಳ ಸವಿನೆನಪು ಇಲ್ಲಿದೆ.
ಈ ಚಾರಿತ್ರಿಕ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಮೇಲ್ದರ್ಜೆಗೇರಿಸಿ, ರಾಷ್ಟ್ರೀಯ ಮಟ್ಟದ 'ಸ್ವಾತಂತ್ರ್ಯ ಪಾರಂಪರಿಕ ಉದ್ಯಾನವನ' (Freedom Heritage Park) ಹಾಗೂ ಗಾಂಧಿ ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲು ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಶ್ರಮಿಸುತ್ತಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ
ಈ ಚಾರಿತ್ರಿಕ ಕ್ಷೇತ್ರಕ್ಕೆ ಸುಸಜ್ಜಿತ ಮೂಲಸೌಕರ್ಯ ಹಾಗೂ ರಾಜ್ಯಮಟ್ಟದ ಅನುದಾನ ಒದಗಿಸಲು ಶಾಸಕ ಡಾ. ಶ್ರೀನಿವಾಸ್ ಎನ್. ಟಿ. ಸಂಕಲ್ಪ.
ಕೂಡ್ಲಿಗಿ ರಾಷ್ಟ್ರೀಯ ಸ್ಮಾರಕ & ಪ್ರವಾಸಿ ತಾಣಗಳ ಛಾಯಾಚಿತ್ರ ಗ್ಯಾಲರಿ
ಪ್ರವಾಸಿ ತಾಣವಾಗದ ಹುತಾತ್ಮರ ಸ್ಮಾರಕ (ಗಾಂಧಿ ಸೌಧ) ಪತ್ರಿಕಾ ತುಣುಕುಗಳು & ಚಾರಿತ್ರಿಕ ದಾಖಲೆಗಳು. ಹಿಗ್ಗಿಸಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.








.jpeg)



.jpeg)

























.jpeg)






.jpeg)




